ಪ್ರಾಣಸ್ಥಾನದಲ್ಲಿ ಆಪ್ಯಾಯನವಾಯಿತ್ತು, ಲಿಂಗಜಂಗಮ.
ತನುಸ್ಥಾನದಲ್ಲಿ ಆಪ್ಯಾಯನವಾಯಿತ್ತು,
ಆಚಾರಲಿಂಗಸ್ಥಲ, ಗುರುಲಿಂಗಸ್ಥಲ. ಈ ಉಭಯಸ್ಥಲ ನಿಃಸ್ಥಲವಾಗಿ,
ತಾನೊಂದೇ ತೋರುತ್ತಿರ್ದಿತ್ತು.
ಈ ತೋರುವ ತೋರಿಕೆಯೆ ಬಸವಣ್ಣನೆನಗೆ.
ಆ ಬಸವಣ್ಣನ ಕರುಣದಿಂದ ಪ್ರಭುದೇವರ ಶ್ರೀಪಾದವ ಕಂಡು,
ನಾನು ಬದುಕಿದೆನು ಕಾಣಾ, ಗವರೇಶ್ವರಾ.
Art
Manuscript
Music
Courtesy:
Transliteration
Prāṇasthānadalli āpyāyanavāyittu, liṅgajaṅgama.
Tanusthānadalli āpyāyanavāyittu,
ācāraliṅgasthala, guruliṅgasthala. Ī ubhayasthala niḥsthalavāgi,
tānondē tōruttirdittu.
Ī tōruva tōrikeye basavaṇṇanenage.
Ā basavaṇṇana karuṇadinda prabhudēvara śrīpādava kaṇḍu,
nānu badukidenu kāṇā, gavarēśvarā.