ವಚನ - 744     
 
ಅಗ್ಘವಣಿಯ ತಂದು ಮಜ್ಜನವ ಮರೆದವನ, ಪುಷ್ಪವ ತಂದು ಪೂಜೆಯ ಮರೆದವನ, ಓಗರವ ತಂದು ಅರ್ಪಿತವ ಮರೆದವನ, ಲಿಂಗವ ಕಂಡು ತನ್ನ ಮರೆದವನ, ಮಹಾಘನವ ಒಳಕೊಂಡಿತ್ತು ಗುಹೇಶ್ವರಾ.