Index   ವಚನ - 2    Search  
 
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಭಂಡಾರಿ ಬಸವಣ್ಣನೆ. ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ನಂಬಿಯಣ್ಣನೆ. ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಜಗದೇವನೆ. ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಚೆನ್ನಬಸವಣ್ಣನೆ. ಆನೆ ಮುರಿದಲ್ಲಿ ಸುಂಡಾಳವೆ ಹೇಳಾ ? ನಾನಿಲ್ಲದಿರ್ದಡೆ ನೀನಿಲ್ಲ, ನೀನಿಲ್ಲದಿರ್ದಡೆ ನಾನಿಲ್ಲ. ನಾನು ನೀನೆಂಬುದಂತಿರಲಿ. ಹಿಡಿಯೊ, ಮುಡಿಯೊ ಮಾಡಿದಂತೆಯಪ್ಪೆನು. ನಗುವುದು ಕೆಲಕಡೆ ನೋಡಾ. ಸಾತ್ವಿಕ ಸಜ್ಜನ ಸದ್ಗುರುವಿನಿಂದ ಬದುಕಿದೆ ನಾನು, ನಿನಗಂಜೆ ಮಹಾಲಿಂಗ ಚೆನ್ನರಾಮಾ.