Index   ವಚನ - 12    Search  
 
ಅಂದಳದ ಮುಂದೆ ವಂದಿಸಿಕೊಂಡೆನೆಂದು ತ್ರಿವಿಧವ ಹೆರೆಹಿಂಗಿ ಮಾಡುವ ನಿರ್ಬಂಧಿಗನ ನೋಡಾ. ಕಂಡಕಂಡವರ ಮನೆಯಲ್ಲಿ ಕೊಂಡಾಡಬೇಕೆಂದು ಹಿಂಡ ಕೂಡಿ ಕೂಳನಿಕ್ಕುವ ಭಂಡರಿಗೆಲ್ಲಿಯದೊ ಭಕ್ತಿ? ಇವರಂದಕ್ಕೆ ಅಂದೇ ಹೊರಗು, ಸಂದೇಹವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.