Index   ವಚನ - 23    Search  
 
ಅಜಾಮಲ ಲಿಂಗವಾದಲ್ಲಿ, ಲೆಕ್ಕದ ಬುಡ ನಿಶ್ಚಯಲಿಂಗವಾದಲ್ಲಿ ಮತ್ತೆ ಕಾಷ್ಠದ ವೇಷ ಗುರುಚರಲಿಂಗವಾದಲ್ಲಿ, ಎನ್ನ ಕಾಯಕದ ಕಾಷ್ಠ ಚಿನ್ನವಾದಲ್ಲಿ, ಮತ್ತಾವಾವ ಗುಣ ಅವಗುಣ ಹಿಂಗಿ ಲೇಸಾದಲ್ಲಿ, ಅದು ತನ್ನಯ ವಿಶ್ವಾಸದಿಂದ, ತನಗೆ ಆರೆಂಬುದನರಿತು, ಕುರಿತು ಆ ಭಾವಕ್ಕೆ ಬಲೋತ್ತರನಾಗಿದ್ದಾತನ ಇರವು, ಎಂತಿದ್ದಡಂತೆ ಸುಖ, ನಿಃಕಳಂಕ ಮಲ್ಲಿಕಾರ್ಜುನಾ.