Index   ವಚನ - 25    Search  
 
ಅಣುಮಾತ್ರವಪ್ಪ ವಾಯುವ, ಮನದ ಕೊನೆಯ ಮೊನೆಯಲ್ಲಿ ಸಪ್ತಸಮುದ್ರ, ದಿಗ್ವಳಯದ ಗಿರಿಗಳು ಮುಂತಾದವ ತನ್ನ ಸತ್ವದಲ್ಲಿ ಎತ್ತುವದ ಕಂಡೆ. ಕೊಂಡು ಹೋಹುದ ಕಂಡುದಿಲ್ಲ. ಎತ್ತಿ ಎಯ್ದಿಹೆನೆಂಬುದರಲ್ಲಿ, ವಾಯುಸತ್ವ ನಷ್ಟವಾಯಿತ್ತು. ಇಂತೀ ಗುಣವ ತ್ರಿಗುಣಾತ್ಮಕರು ತಿಳಿದು, ಜಡ ಅಜಡವೆಂಬುದ ಕಳೆದು ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಳಗು ಮಾಡಿರೆ.