Index   ವಚನ - 37    Search  
 
ಅಪ್ಪುವಿನ ಯೋಗದ ಕಾಷ್ಠ ಹೊತ್ತುವಲ್ಲಿ, ಮೆಚ್ಚನೆ ತಮದ ಧೂಮ, ಶುಷ್ಕದ ಅಪ್ಪುವಿನ ಗುಣ. ಅಪ್ಪುವರತು ಶುಷ್ಕ [ತೊ]ಟ್ಟಾರೆ, ಕಿಚ್ಚು ಮುಟ್ಟುವುದಕ್ಕೆ ಮುನ್ನವೆ, ಹೊತ್ತಿ ಬೇವುದದು ಕಿಚ್ಚೋ, ಮತ್ತೊಂದೋ ? ಇಂತೀ ಉಭಯವನರಿತು, ಒಂದರಲ್ಲಿ ಒಂದು ಅದೆಯೆಂಬ ಸಂದೇಹವ ನೋಡಾ. ಅಲ್ಲಾ ಎಂದಡೆ ಭಿನ್ನಭಾವ, ಅಹುದೆಂದಡೆ ಇಷ್ಟದ ದೃಷ್ಟವೊಂದೆಯಾಗಿದೆ. ಜನ ಜಾತ್ರೆಗೆ ಹೋದವನಂತೆ ಕೂಟದಲ್ಲಿ ಗೋಷ್ಠಿ ಹರಿದಲ್ಲಿ, ತಮ್ಮ ತಮ್ಮ ಮನೆಯ ಇರವಿನ ಹಾದಿ. ಇಂತಿವನರಿದು ಬಾಡಗೆಯ ಮನೆಗೆ ಹೊಯ್ದಾಡಲೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ.