Index   ವಚನ - 56    Search  
 
ಅರಿವೆ ಹೇಳುವರೆಲ್ಲರೂ ಮರವೆಯಲ್ಲಿ ಬಿದ್ದು ಮೂರೆಲೆ ಹಿಡಿದರಲ್ಲಾ. ಅದು ಬಾಯಿಗೆ ಪಸಲೆ, ಕೈಗೆ ಕಳಂಕ, ಜ್ಞಾನಕ್ಕೆ ದೈವ. ಇದ ಭಾವಿಸುವರಿಗೇಕೆ ಜ್ಞಾನ, ನಿಃಕಳಂಕ ಮಲ್ಲಿಕಾರ್ಜುನಾ?