Index   ವಚನ - 66    Search  
 
ಅಷ್ಟ [ಕು] ಲ ದಿಗ್ದೇಶವನೆಲ್ಲವನು, ತತ್ತಿಯೊಳಗಣ ತುಪ್ಪುಳು ನುಂಗಿತ್ತು. ತುಪ್ಪುಳ ಬಲಿದು ಮತ್ತೆ ಹಾರಲಾಗಿ, ಮತ್ತಾ ತತ್ತಿಯ ನುಂಗಿತ್ತು. ಮಹಾಹಕ್ಕಿಯ ತುಪ್ಪುಳ, ತತ್ತಿಯ ಚಿತ್ತು ನುಂಗಿತ್ತು. ನುಂಗಿದ ಚಿತ್ತುವ ಅಭಂಗ ಕೊಂಡಿತ್ತು. ಅದಕ್ಕೆ ಸಂಗ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.