Index   ವಚನ - 75    Search  
 
ಆಗಮವನರಿದಲ್ಲಿ ಆಗುಚೇಗೆಯನರಿಯಬೇಕು. ಶಾಸ್ತ್ರವನರಿದಲ್ಲಿ ಸಾವನರಿಯಬೇಕು. ಪುರಾಣವನರಿದಲ್ಲಿ ಪುಂಡರ ಸಂಗವ ಹರಿಯಬೇಕು. ಇಂತಿವನರಿದ ಚಿತ್ತಶುದ್ಧಂಗಲ್ಲದೆ ಸನ್ಮತವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.