ಆ ಲಿಂಗಸ್ಥಲ ಭಾವ[ಸ್ವ]ರೂಪವಾದಲ್ಲಿ,
ಪ್ರಾಣಲಿಂಗಿ ಶರಣ ಐಕ್ಯನೆಂಬೀ ತ್ರಿವಿಧವ ತಾಳ್ದು,
ಮೂರ್ತಿ ಕುರುಹುಗೊಂಬಲ್ಲಿ,
ನಾನಾ ಮಧುರ[ರ] ಸದಂಡ ವೃಕ್ಷಂಗಳಲ್ಲಿ,
ಮಿಕ್ಕಾದ ಲತೆ ಪಚ್ಚೆ ಪೈರುಗಳಲ್ಲಿ,
ಕುಸುಮ ಗಂಧ ಮೃಗಗಂಧಗಳು ಮುಂತಾದ
ಸ್ಥಾವರ ಸುಗಂಧ ಸುವಾಸನೆಗಳಿಗೆಲ್ಲಕ್ಕೂ
ತದ್ರೂಪಿಂಗೆ ಹಿಂಗದಂತೆ ಬಂದೊದಗಿ, ಸಂಗದಂತೆ
ಕುರುಹುಗೊಂಡೆಯಲ್ಲಾ.
ಕಾಯದ ಜೀವದ ಉಭಯದ ಮಧ್ಯದಲ್ಲಿ ನಿಂದು,
ದೇವಾನಾದೆಯಲ್ಲಾ ನಿನ್ನ ಲೀಲೆ ಕಾರಣವಾಗಿ.
ಸಂದೇಹಿಗಳಿಗೆ ಸಂಕಲ್ಪಿಯಾಗಿ, ನಿರಂಗಿಗೆ ನಿರಾಲಂಬನಾಗಿ,
ಸಮ್ಯಕ್ಜ್ಞಾನ ಮುಕುರದಂತೆ ಸಂಬಂಧಿಸಿದೆಯಲ್ಲಾ.
ನಿರಂಗ ನಿಃಕಳಕ ಮಲ್ಲಿಕಾರ್ಜುನಾ, ನಿನ್ನಿರವ ನೀನೇ ಬಲ್ಲೆ.
Art
Manuscript
Music
Courtesy:
Transliteration
Ā liṅgasthala bhāva[sva]rūpavādalli,
prāṇaliṅgi śaraṇa aikyanembī trividhava tāḷdu,
mūrti kuruhugomballi,
nānā madhura[ra] sadaṇḍa vr̥kṣaṅgaḷalli,
mikkāda late pacce pairugaḷalli,
kusuma gandha mr̥gagandhagaḷu muntāda
sthāvara sugandha suvāsanegaḷigellakkū
Tadrūpiṅge hiṅgadante bandodagi, saṅgadante
kuruhugoṇḍeyallā.
Kāyada jīvada ubhayada madhyadalli nindu,
dēvānādeyallā ninna līle kāraṇavāgi.
Sandēhigaḷige saṅkalpiyāgi, niraṅgige nirālambanāgi,
samyakjñāna mukuradante sambandhisideyallā.
Niraṅga niḥkaḷaka mallikārjunā, ninnirava nīnē balle.