Index   ವಚನ - 117    Search  
 
ಇಷ್ಟಲಿಂಗವನರಿದು ಪೂಜೆಯ ಮಾಡಿ, ಪ್ರಾಣಲಿಂಗವನರಿದು ಪಥ್ಯದ ಕೊಂಡು, ಜಂಗಮವಾದೆವೆಂಬ ಮಿಥ್ಯತಥ್ಯದ ಅಣ್ಣಗಳು ಕೇಳಿರೊ. ಕೊಟ್ಟಾತ ಗುರು, ಕೊಂಡಾತ ಶಿಷ್ಯನೆಂದು ಜಗದಲ್ಲಿ ಅಂದಗಾರಿಕೆಯಲ್ಲಿ ನಡೆವ ಭಂಡರಿಗೇಕೆ ಲಿಂಗಾಂಗ, ನಿಃಕಳಂಕ ಮಲ್ಲಿಕಾರ್ಜುನಾ.