Index   ವಚನ - 138    Search  
 
ಉದಕದ ರಸದಂತೆ, ಅಗ್ನಿಯ ಉಭಯದಂತೆ, ವಿಷ ನಿರ್ವಿಷದಂತೆ ಕಾಬ, ಕಾಣಿಸಿಕೊಂಬ ಭೇದ. ತನುವಿನ ಮೇಲಿನ ಲಿಂಗದ ನೆನಹು, ಪ್ರಾಣನ ಮೇಲಿಹ ಭಾವದ ಸಂಚು. ಆ ಉಭಯವನೊಳಕೊಂಡ ಜ್ಞಾನದ ಬಿಂದು, ಸದಮಲ ಬೆಳಗಿನೊಳಗೆಯ್ದಿದ ಮತ್ತೆ ಬಿಡುಮುಡಿ ಎರಡಿಲ್ಲ. ಆದು ಶರಣನ ನಿಜದೈಕ್ಯ, ನಿಃಕಳಂಕ ಮಲ್ಲಿಕಾರ್ಜುನಾ.