Index   ವಚನ - 146    Search  
 
ಉರಿ ನೀರು ಕುಂಭದಂತೆ ಆಗಬಲ್ಲಡೆ, ಕಾಯಲಿಂಗಸಂಬಂಧಿ. ತರು ಧರಿಸಿದ ನೀರು ಉರಿಯಂತಾಗಬಲ್ಲಡೆ, ಭಾವಲಿಂಗಸಂಬಂಧಿ. ಕರ್ಪುರ ಧರಿಸಿದ ಅಪ್ಪು ಉರಿಯ ಯೋಗದಂ ಪ್ರಾಣಲಿಂಗ ಸಂಬಂಧಿ. ಇಂತೀ ಇವನಿಪ್ಪ ಭೇದವನರಿದು ನಿಶ್ಚಯಿಸಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.