Index   ವಚನ - 149    Search  
 
ಉರಿವ ಗಿರಿಯ ಮೇಲೆ ಬೆಣ್ಣೆಯ ಕೋಣ ಹುಟ್ಟಿ, ಕರ್ಪುರದ ಘಟ್ಟಿ ಸೋಪಾನ ಕಟ್ಟಿತ್ತು. ಅಜು ಮಂಜಿನ ನೀರು, ಆ ನೀರ ತುಂಬುವುದಕ್ಕೆ ಮಳಲ ಮಡಕೆ, ತುಂಬಿ ಹಿಡಿವುದಕ್ಕೆ ಕೈಯಿಲ್ಲದೆ, ನಡೆವುದಕ್ಕೆ ಕಾಲಿಲ್ಲದೆ, ಮೀರಿ ಹೊರುವುದಕ್ಕೆ ತಲೆಯಿಲ್ಲದೆ ತುಂಬಿ ತರಬೇಕು. ತಂದು ಬಂದು ನಿಂದಲ್ಲಿ, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಮುಟ್ಟಿ, ಬಾಯಿಲ್ಲದೆ ಈಂಟಿ, ಅರಿವಿಲ್ಲದ ತೆರದಲ್ಲಿ ಸುಖಿಯಾದ ಐಕ್ಯಂಗೆ ಲಕ್ಷಿಸಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.