Index   ವಚನ - 153    Search  
 
ಊರಾಡಿದಂತಾಡದಿರ್ದಡೆ ದೂರಿಹರೆನ್ನನು. ನಾಡಾಡಿದಂತಾಡದಿರ್ದಡೆ ಬೈದಹರೆನ್ನನು. ಕೆಸರೊಳಗೆ ಮುಳುಗಿ ಹೊಸಸೀರೆಯೆಂದಡೆ, ಅದರ ಪಾಶ ಕುಸುಕಿರಿಯದೆ ಮಾಣ್ಬುದೆ ? ಈ ದೂಷಣೆ ಇನ್ನೇಸು ಕಾಲ ? ಭವಪಾಶರಹಿತ ಓಸರಿಸುವಂತೆ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.