Index   ವಚನ - 159    Search  
 
ಊರೊಳಗಿದ್ದು ಊರು ಸುಡಬೇಕಲ್ಲದೆ, ಊರ ಹೊರಗಿದ್ದು ಸುಡಬಹುದೆ ಅಯ್ಯಾ? ಕ್ರೀಯೊಳಗದ್ದು ಕ್ರೀಯನರಿಯಬೇಕಲ್ಲದೆ, ಕ್ರೀ ಹೊರಗಾಗಿ ಜ್ಞಾನವುಂಟೆ ಅಯ್ಯಾ ? ಕೈದಟ್ಟುವ ಠಾವಿನಲ್ಲಿ ಕಾಳವಗಲ್ಲದೆ ಕೈದಟ್ಟದ ಠಾವಿನಲ್ಲಿ ಕಾಳಗವುಂಟೆ ಅಯ್ಯಾ ? ನಾ ನೀನಾದಡೆ ದೇವ, ನೀ ನಾನಾದಡೆ ದೇವ. ಉಭಯವ ವೇಧಿಸಿದಲ್ಲಿ ತಾನು ತಾನೆ, ನಿಃಕಳಂಕ ಮಲ್ಲಿಕಾರ್ಜುನಾ.