Index   ವಚನ - 165    Search  
 
ಎನ್ನ ನೆನಹಿನ ನಿಧಿಯ ನೋಡಾ, ಎನ್ನ ಅನುವಿನ ಘನವ ನೋಡಾ. ಆಹಾ ಎನ್ನ ಪುಣ್ಯವೆ, ಆಹಾ ಎನ್ನ ಭಾಗ್ಯವೆ, ಆಹಾ ಎನ್ನ ಕಂಗಳ ಮನೆಯ ಮಾಡಿಕೊಂಡಪ್ಪ ನಿತ್ಯದ ಬೆಳಗೆ. ಎನ್ನ ಧಾನ್ಯದೊಳಗಣ ದೃಢವೆ, ಎನ್ನ ಸುಖದೊಳಗಣ ಸುಗ್ಗಿಯೆ. ನಿಃಕಳಂಕ ಮಲ್ಲಿಕಾರ್ಜುನಾ. ನಿಮ್ಮ ಶರಣ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.