ಎಷ್ಟು ಪಟುಭಟನಾದಡೂ ಸ್ಫುಟದ ಮನೆಯಲ್ಲಿ ಅಡಗಬೇಕು.
ದಿಟಪುಟವನರಿದಡೂ ಗುರು ಕೊಟ್ಟ ನಿಟಿಲಲೋಚನನ ಘಟಿಸಬೇಕು.
ಭಿತ್ತಿಯ ಮೇಲೆ ಚಿತ್ತಾರ ಒಪ್ಪವಿಟ್ಟಂತಿರಬೇಕು.
ಗುರು ಕೊಟ್ಟ ಇಷ್ಟದ ಬೆಂಬಳಿಯ ದೃಷ್ಟವನರಿಯಬೇಕು.
ಮೆಟ್ಟಿದುದು ಜಾರಿ, ಹಿಡಿದುದ ಮುರಿದ ಮತ್ತೆ,
ಎರಡುಗೆಟ್ಟವಂಗೆ ಇನ್ನೇತಕ್ಕೆ, ನಿಃಕಳಂಕ ಮಲ್ಲಿಕಾರ್ಜುನಾ ?