Index   ವಚನ - 171    Search  
 
ಏಕಾಕಾಶದಿಂದ ಅಂಬು ಸಂಭ್ರಮಿಸಿತ್ತು. ಬಹುವರ್ಣದ ಧರಿತ್ರಿಯಲ್ಲಿ, ಅವರವರ ವರ್ಣಛಾಯೆ ನಿಂದಿತ್ತು. ಕೂಡಿ ವೇಧಿಸಿ ಚರಿಸಲಾಗಿ, ಒಂದೆ ಗುಣ ನಿಂದಿತ್ತು. ಅದು ತಟಾಕದಲ್ಲಿ ಆಶ್ರಯಿಸಲಾಗಿ, ಸ್ತೋಮವಾಯಿತ್ತು. [ಕೀಳಿನಲ್ಲಿ] ನಿಂದು ಜಾಳಿಸಲಾಗಿ, ಸ್ತೋಮ ಬಿಟ್ಟಿತ್ತು. ಭಾವಿಸಿ ನೋಡಿಹೆನೆಂದಡೆ ಪ್ರಮಾಣವಿಲ್ಲ ಕಂಡಯ್ಯಾ. ಇಂತೀ ಪ್ರಕಾರದಲ್ಲಿ ಜನಿಸಿದ ಪಿಂಡ ಹಿಂಗುವ ಠಾವಿನ್ನಾವುದೊ ? ಒಂದು ಚಕ್ರದಲ್ಲಿ ಜನಿಸಿದ ನಾನಾವರ್ಣದ ಕುಂಭಂಗಳಿಗೆ ಸ್ಥೂಲ ಸೂಕ್ಷ್ಮದ ಅನ್ಯವ ಕಲ್ಪಿಸಲುಂಟೇ ಒಂದೆ ಗುಣದ ಬಗೆಯಲ್ಲದೆ ? ಅಡಗಿದ ತತ್ವಂಗಳ ತತ್ವಮುದ್ದೆಯ ತುತ್ತನೊಲ್ಲದೆ ನಿಶ್ಚಯವಾದ, ನಿಃಕಳಂಕ ಮಲ್ಲಿಕಾರ್ಜುನಾ.