Index   ವಚನ - 181    Search  
 
ಒಂದು ಮೂರಾದ ಭೇದವ, ಮೂರು ಆರಾದ ಭೇದವ, ಆರು ಇಪ್ಪತ್ತೈದಾದ ಭೇದವ, ಇಪ್ಪತ್ತೈದು ನೂರೊಂದಾದ ಭೇದವ, ಒಂದನರಿಯದ ಯೋಗಿಗಳ ಪಾಶವನಳೆವ ತೆರದಂತೆ, ಆ ನೂರೊಂದು ಇಪ್ಪತ್ತೈದರಲ್ಲಿ ಅಡಗಿತ್ತು. ಆ ಇಪ್ಪತ್ತೈದು ಆರರಲ್ಲಿ ಅಡಗಿತ್ತು. ಆ ಆರು ಮೂರರಲ್ಲಿ ಅಡಗಿತ್ತು, ಆ ಮೂರು ಒಂದರಲ್ಲಿ ಸಂದಿತ್ತು. ಆ ಒಂದು ಸಂದೇಹವಳಿಯಿತ್ತು. ಇದರಂದವನಾರು ಬಲ್ಲರಯ್ಯಾ ? ಸಂದೇಹದಲ್ಲಿ ಬಿದ್ದು, ಲಿಂಗವನರಿಯದೆ ಭಂಗಿತರಾದರಯ್ಯಾ, ಆಗಮಕ್ಕತೀತ ಆನಂದ ದಾವಾನಲ, [ಭ]ವರಹಿತ ನಿಃಕಳಂಕ ಮಲ್ಲಿಕಾರ್ಜುನಾ.