ಓ ಎಂದಲ್ಲಿ ನಿರಾಕಾರವಸ್ತುವಾದೆಯಲ್ಲಾ,
ಓಂ ಎಂದಲ್ಲಿ ಸಾಕಾರವಸ್ತುವಾದೆಯಲ್ಲಾ.
ತತ್ತ್ವಮಸಿಯೆಂದಲ್ಲಿ ತತ್ವರೂಪಾಗಿ,
ಜಗವ ರಕ್ಷಿಸಿಹೆನೆಂದು ಕರ್ತೃರೂಪಾದೆಯಲ್ಲಾ.
ನಿಮಗೆ ಮರ್ತ್ಯದ ಮಣಿಹ ಎಲ್ಲಿಯ ಪರಿಯಂತರ,
ಎನಗೆ ಕಟ್ಟುಗುತ್ತಗೆಯೆ? ನಾ ಕಟ್ಟಿಗೆಯ ಹೊತ್ತೆ, ಶಿವಭಕ್ತರ ಮನೆಗೆ.
ನೀವು ಕೊಟ್ಟ ಕಾಯಕದ ಕೃತ್ಯ, ಇನ್ನೆಷ್ಟುದಿನ ಹೇಳಾ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Ō endalli nirākāravastuvādeyallā,
ōṁ endalli sākāravastuvādeyallā.
Tattvamasiyendalli tatvarūpāgi,
jagava rakṣisihenendu kartr̥rūpādeyallā.
Nimage martyada maṇiha elliya pariyantara,
enage kaṭṭuguttageye? Nā kaṭṭigeya hotte, śivabhaktara manege.
Nīvu koṭṭa kāyakada kr̥tya, inneṣṭudina hēḷā,
niḥkaḷaṅka mallikārjunā.