ಕಂಡು ನೋಡಿದಲ್ಲಿ ಕಂಗಳಿಗೆ ಸುಖ,
ಉಂಡು ನೋಡಿದಲ್ಲಿ ಜಿಹ್ವೆಗೆ ಸುಖ,
ಮುಟ್ಟಿ ನೋಡಿದಲ್ಲಿ ತ್ವಕ್ಕಿಗೆ ಸುಖ.
ಮುಖಮುಖಂಗಳಲ್ಲಿ ಭಿನ್ನವಿಲ್ಲದೆ,
ಅರ್ಪಿತಾವಧಾನ ಏಕಮುಖವೆಂದೆ.
ಜಾತಿಗೆ ಬೇರೆ ಹರುಗೋಲುಂಟೆ ?
ಆಚಾರಕ್ಕೆ ಬೇರೆ ಕುಲಛಲವುಂಟೆ ?
ಶಿಲೆ ಹಲವು ರೂಪಾದ ತೆರನಂತೆ,
ಅವರ ಒಲವರದ ರೂಪು ಅವರ ಛಲದ ಗುಣ.
ಬಳಿಕೆವಂತರೆಲ್ಲ ನಳಕೆಯ ಕೀರನಂತೆ, ಅವರರಿದಾಗ ಅರಿವಲ್ಲ,
ನಾ ನುಡಿದ ತಪ್ಪನೊಪ್ಪುಗೊಳ್ಳಾ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Kaṇḍu nōḍidalli kaṅgaḷige sukha,
uṇḍu nōḍidalli jihvege sukha,
muṭṭi nōḍidalli tvakkige sukha.
Mukhamukhaṅgaḷalli bhinnavillade,
arpitāvadhāna ēkamukhavende.
Jātige bēre harugōluṇṭe?
Ācārakke bēre kulachalavuṇṭe?
Śile halavu rūpāda teranante,
avara olavarada rūpu avara chalada guṇa.
Baḷikevantarella naḷakeya kīranante, avararidāga arivalla,
nā nuḍida tappanoppugoḷḷā, niḥkaḷaṅka mallikārjunā.