Index   ವಚನ - 205    Search  
 
ಕಟ್ಟಿ ಬಿಟ್ಟು ಕಂಡೆಹೆವೆಂದು ಬಿಗಿದಿಪ್ಪರಂತೆ ಕೆಲ[ವರು]. ಕಣ್ಣು ಮುಚ್ಚಿ ಧ್ಯಾನದಿಂದರಿದು ನಿಂದಿಹೆವೆಂದು ಕೆಲ[ವರು]. ಜಪತಪ ನೇಮದಿಂದ ತಿರುಹಿ ಕಂಡೆಹೆವೆಂದು ಕೆಲ[ವರು]. ವೇದ ಶಾಸ್ತ್ರ ಆಗಮವ ನೋಡಿ ಕಂಡೆಹೆವೆಂದು ಕೆಲ[ವರು]. ಮಾಡಿ ನೀಡಿ ಕೊಟ್ಟುಕೊಂಡು ಸುಖಿಯಾಗಿ ನಿಂದಿಹೆವೆಂದು [ಕೆಲವರು]. ಕರ್ತೃ ಭೃತ್ಯರಾದೆಹೆವೆಂದು [ಕೆಲವರು]. ಲೋಕವೆಲ್ಲ ಕೆಟ್ಟು, ಮುನ್ನಾದಿಯಲ್ಲಿ ಆದ ಲಿಂಗ, ಇದೆ ಸಾಮ್ಯಕೃತ್ಯವೆಂದು ಭೇದಿಸುವುದಕ್ಕೆ ಅತೀತನಾದ ಶೂನ್ಯಲಿಂಗ. ಅನ್ಯಸಾಧ[ಕ]ಕ್ಕೆ ಸಿಕ್ಕದಿಪ್ಪ ಅನಾಗತ ಸಂಸಿದ್ಧಲಿಂಗವನು, ತನ್ನನರಿದು ಇದಿರ ಕಂಡಡೆ, ಪ್ರಾಣಲಿಂಗವದೇಕೊ ? ಏನೂ ಎನ್ನದೆ, ಅದೆಂತೂ ಎನ್ನದಿರ್ಪ ನಿಃಕಳಂಕ ಮಲ್ಲಿಕಾರ್ಜುನ ತಾನೆ ಬಲ್ಲ.