Index   ವಚನ - 215    Search  
 
ಕದ್ದ ಕಳವ ಮರೆಸಿಕೊಂಡು, ನಾ ಸಜ್ಜನನೆಂಬಂತೆ, ಇದ್ದ ಗುಣವ ನೋಡಿ, ಹೊದ್ದಿ ಸೋದಿಸಲಾಗಿ, ಕದ್ದ ಕಳವು ಕೈಯಲ್ಲಿದ್ದ ಮತ್ತೆ, ಸಜ್ಜನತನವುಂಟೆ ? ಇಂತೀ ಸಜ್ಜನಗಳ್ಳರ ಕಂಡು ಹೊದ್ದದೆ ಹೋದ, ನಿಃಕಳಂಕ ಮಲ್ಲಿಕಾರ್ಜುನಾ.