ಕಾಳಗಕ್ಕೆ ಆಳಾಗಿ ಬಂದೆ.
ಎನಗಿದಿರಾಗಿ ಕೈದುವ ಹಿಡಿವವರನಾರನೂ ಕಾಣೆ.
ಅಗೆದು ನೋಡಿದೆ, ಮೊಗೆದು ನೋಡಿದೆ, ಎನಗೆ ಇದಿರಹವರಿಗೆ.
ಎನ್ನ ದೇಹ ವಜ್ರಾಂಗಿಯೆ ? ಎನ್ನ ಕರ ಕಂಪಿಸುವ ಕೈದೆ ?
ಎನ್ನ ಹೃದಯ ಬೆಳಗಿನೆದೆಗಿಚ್ಚೆ ? ನಿರ್ಭೀತಿ ನೀತಿಯೆ ?
ಎನ್ನನೊಡಗೂಡಾ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Kāḷagakke āḷāgi bande.
Enagidirāgi kaiduva hiḍivavaranāranū kāṇe.
Agedu nōḍide, mogedu nōḍide, enage idirahavarige.
Enna dēha vajrāṅgiye? Enna kara kampisuva kaide?
Enna hr̥daya beḷaginedegicce? Nirbhīti nītiye?
Ennanoḍagūḍā, niḥkaḷaṅka mallikārjunā.