Index   ವಚನ - 253    Search  
 
ಕಾಳರಾತ್ರಿಯೆಂಬ ಕತ್ತಲೆಯ ಮನೆಯ ಹೊಕ್ಕು, ಜಾಳಿಗೆಯ ಮುದ್ರೆಯನೊಡೆದನೆಂಬವನಂತೆ, ಸಭೆಯಲ್ಲಿರ್ದು ನಭವನಡರಿದೆನೆಂಬವನಂತೆ, ಗಡಿಗೆಯಲ್ಲಿ ಸಮುದ್ರವ ತುಂಬಿ ಅಡಗಿಸಿದೆನೆಂಬವನಂತೆ ಸರ್ವವನೊಡಗೂಡಿ ಹರಿದಾಡುತ್ತ, ಸಡಗರಿಸುತ್ತ, ಲಲನೆಯರೊಡಗೂಡುತ್ತ, ಕರಣಂಗಳಲ್ಲಿ ಬಡಿಹೋರಿಯಾಗುತ್ತ, ಲಿಂಗವನರಿದೆನೆಂಬ ಸುಗುಡರ ನೋಡಾ. ಜಾಗ್ರದಲ್ಲಿ, ಕನಸಿನಲ್ಲಿ ತಾ ಸತ್ತೆನೆಂದು ಎಚ್ಚತ್ತು ಅಳುವ ಕುಚಿತ್ತನಂತೆ, ನಿಃಕಳಂಕ ಮಲ್ಲಿಕಾರ್ಜುನಾ.