Index   ವಚನ - 255    Search  
 
ಕಾಳೆಮ್ಮೆಯ ಕರೆಯಲಾಗಿ, ಹಾಲು ರೋಹಿತವಾಗಿ ಬಿದ್ದಿತ್ತು. ರೋಹಿತವಾದುದ ಕಂಡು, ಕರೆವ ಬಾಲೆ ಹಾಲಿಲ್ಲಾ ಎಂದಡೆ, ಮೇಲಿದ್ದಾತ ನೋಡಿ ಹಾಲನಳಿದು ಹೆಪ್ಪ ಬಿಡೆಂದ. ಶೋಣಿತವಳಿದು ಹೋಗಲಾಗಿ ಹೆಪ್ಪಾಯಿತ್ತು, ಅದು ಶೂಲಪಾಣಿಯ ಮರದ ಮಂತಿನಲ್ಲಿ, ಏನೂ ಇಲ್ಲದ ನೇಣು ಹೂಡಿ ಕಡೆಯೆ, ಮಡಕೆಯ ಬಾಯಲ್ಲಿ ಕರಗಿತ್ತು ಬೆಣ್ಣೆ, ನಿಃಕಳಂಕ ಮಲ್ಲಿಕಾರ್ಜುನಾ.