Index   ವಚನ - 265    Search  
 
ಕುರುಹವಿಡಿದು ಕಂಡೆಹೆನೆಂದಡೆ, ಪುಣ್ಯವ ಮಾಡಬೇಕೆಂಬರು. ಅರಿದು ಕಂಡೆಹೆನೆಂದಡೆ ಕಾಯದ ಕರಣಂಗಳ ಬಿಡಬೇಕೆಂಬರು. ಕೆಟ್ಟೆವಯ್ಯಾ, ಚಕ್ರದಂಡದಲ್ಲಿ ಸಿಕ್ಕಿದ ಮರ್ಕಟನಂತೆ, ನಿಃಕಳಂಕ ಮಲ್ಲಿಕಾರ್ಜುನಾ.