Index   ವಚನ - 267    Search  
 
ಕುಲಿಶ ಅಂಗುಲದೊಳಗಡಗಿದಡೆ, ಕುಟ್ಟದೆ ಬೆಟ್ಟವ ಹಿಟ್ಟುಗುಟ್ಟಿ ? ಶಿಲೆಯೊಳಗಡಗಿದ್ದ ಪಾವಕ ಉದಯಿಸಿ ಸುಡದೆ ಮಹಾರಣ್ಯವ ? ಚಿತ್ತುವಿನಲ್ಲಿ ಉದಯಿಸಿದ ಜ್ಞಾನ, ತನುವಿನ ಮೊತ್ತದೊಳಗಿಪ್ಪ ಕಟ್ಟೇಂದ್ರಿಯವ ನಷ್ಟವ ಮಾಡದೆ ? ಸರ್ಪದಷ್ಟವಾದಡೇನು ವಿಷ ಚಲನೆಯಾಗಿಯಲ್ಲದೆ ತನುವಿನ ಮರವೆಯಿಲ್ಲ. ಹೀಂಗೆ ಘಟಿಸಿಯಲ್ಲದೆ ಅಘಟಿತವಾಗಬಾರದು. ಇಂತಪ್ಪ ಪ್ರಕಾಶಿತಂಗೆ ನಮೋ ನಮೋ ಎಂಬೆ ನಿಃಕಳಂಕ ಮಲ್ಲಿಕಾರ್ಜುನಾ.