Index   ವಚನ - 289    Search  
 
ಕೋಲ ಹಿಡಿದು ಆನೆಯನೇರಿದ ಮತ್ತೆ, ಅದು ಭಾವಿಸದು ನೋಡಾ. ಲೋಕಜ್ಞಾನವನರಿದು, ಭಾವಭ್ರಮೆಯಲ್ಲಿ ಚರಿಸಿದಡೆ, ಅರಿಯಬಾರದು ನೋಡಾ. ಅರಿದಲ್ಲಿ ಸಾಗುವನೊಡಲು, ತೆಪ್ಪದ ಮೇಲಿಪ್ಪ ಒಪ್ಪದವೊಲೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.