Index   ವಚನ - 292    Search  
 
ಕ್ರೀವಂತಂಗೆ ಅಂಗ ಭವಿ, ನಿಃಕ್ರೀವಂತಂಗೆ ಮನ ಭವಿ, ವೇಷವ ಹೊತ್ತು ತಿರುಗುವ ಜಂಗಮಕ್ಕೆ ಆಶೆ ಭವಿ. ಇನ್ನಾನೇವೆನಯ್ಯಾ? ಹಿಡಿವ ಎಡೆ ಕಾದ ಮತ್ತೆ ಪಿಡಿವುದಿನ್ನಾವುದೋ ? ಆತ್ಮನು ಅಲಗಾದ ಮತ್ತೆ ಕೊಲುವ ಹಗೆ ಬೇರಿಲ್ಲವಾಗಿ, ಹೇಳುವ ಜ್ಞಾನಿ ಸಂಸಾರಿಯಾದ ಮತ್ತೆ, ಕೆಳೆಗೊಂಡವ ಕೆಟ್ಟ ನೋಡಾ. ಸಾಧನೆಯಿಂದ ಬಂದ ಒದಗು, ಕಳನೇರಿ ಕೈ ಮರೆದಂತೆ, ನಿಃಕಳಂಕ ಮಲ್ಲಿಕಾರ್ಜುನಾ.