Index   ವಚನ - 301    Search  
 
ಗಾರುಡವ ತಿಳಿದಡೆ ಹಾವಿನ ಸರಸವೆ ಲೇಸು. ಆಪ್ಯಾಯನವನರತಡೆ ಹಸುವಿನ ಸಂಗವೆ ಲೇಸು. ವಿಕಾರವರತಡೆ ಕಾಲವ್ಯಾಘ್ರನ ಸಂಭಾಷಣೆಯೆ ಲೇಸು. ನನ್ನನರಿತು, ನಿಮ್ಮ ಬೆರೆದಡೆ ನಾನಗೆ ಲೇಸು, ನಿಃಕಳಂಕ ಮಲ್ಲಿಕಾರ್ಜುನಾ.