Index   ವಚನ - 313    Search  
 
ಗುರುವ ಭಾವಿಸಿದಲ್ಲಿ ಲಿಂಗವ ಮರೆಯಬೇಕು. ಲಿಂಗವ ಭಾವಿಸಿದಲ್ಲಿ ಜಂಗಮವ ಮರೆಯಬೇಕು. ಜಂಗಮವ ಭಾವಿಸಿದಲ್ಲಿ ಪ್ರಸಾದವ ಮರೆಯಬೇಕು. ಪ್ರಸಾದವ ಭಾವಿಸಿದಲ್ಲಿ ಪಾದೋದಕವ ಮರೆಯಬೇಕು. ಪಾದೋದಕವ ಭಾವಿಸಿದಲ್ಲಿ ಪ್ರಸನ್ನವನರಿಯಬೇಕು. ಅರಿದರಿದು ಮರೆವುದು ಮತ್ತೆ ಎಡೆಯ ಕುರುಹಲ್ಲ. ಬೇಡುವವರ ಬಯಕೆ. ಎನ್ನೊಡೆಯನೆ ಒಡಗೂಡಾ, ನಿಃಕಳಂಕ ಮಲ್ಲಿಕಾರ್ಜುನಾ.