Index   ವಚನ - 317    Search  
 
ಗುರುವಿಂಗೆ ತನುವ ಕೊಟ್ಟಿಹೆವೆಂದು ಗುರುವಿಂಗೆ ಭವಭಾರವ ಹೊರಿಸಲೇಕೊ ? ಲಿಂಗಕ್ಕೆ ಮನವ ಕೊಟ್ಟಿಹೆವೆಂದು ಬೆಂಬಳಿಯಲ್ಲಿ ತಿರುಗಲೇಕೊ ? ಜಂಗಮಕ್ಕೆ ಧನವ ಕೊಟ್ಟಿಹೆವೆಂದು ಪಾಶವ ತಪ್ಪಿಸಲೇಕೊ ? ಕೊಟ್ಟೆನೆಂಬುದು ಆಶೆಯೊ, ನಿರಾಶೆಯೊ ? ಕೊಡುವುದಕ್ಕೆ ತಾನಾರೆಂಬುದನರಿದು, ಇದಿರಿಟ್ಟು ಈಸಿಕೊಂಬವನಾರೆಂದರಿದು, ಮಾಡುವ ಭಕ್ತಿಗೆ ಕೇಡಿಲ್ಲದ ಪದವೆಂದರಿದು, ಕೊಟ್ಟವ ಭಕ್ತ, ಕೊಂಡವ ದೇವ. ಇದರ ಬಂಧ ಎನಗೊಂದೂ ಬೇಡ, ನಿಮ್ಮಲ್ಲಿ ಹಿಂಗದಂತಿರಿಸು. ಆನಂದಕ್ಕತೀತ, ಸ್ವಾನುಭಾವಾತ್ಮಕ, ನಿಃಕಳಂಕ ಮಲ್ಲಿಕಾರ್ಜುನಾ.