Index   ವಚನ - 330    Search  
 
ಗೆಲ್ಲಾಳೆಲ್ಲರು ಬಿಲ್ಲನೂರಿ ನಿಂದಿರಲಾಗಿ ಬಿಲ್ಲಿನ ಹೆದೆ ಹರಿದು ಬಿಲ್ಲಿನ ಹೆದೆಯ ಕೊಪ್ಪು ಅಲ್ಲಲ್ಲಿಗೆ ತೊಡಕು, ಮೆಲ್ಲಗೆ ಏರಿಸಿದಡೆ ಹೆದೆ ಅಲ್ಲಿಯೆ ಸಿಕ್ಕಿತ್ತು. ಆ ಹೆದೆಯನಿಳುಹುವರ ಕಾಣೆ. ಬಲ್ಲತನದಿಂದ ಬಿಲ್ಲು ಬೆರಗಾಯಿತ್ತು. ಬಿಲ್ಲ ಹಿಡಿದಾತ ಮರೆದೊರಗಿದ. ಮರೆದೊರಗಿದಾತನ ಕರೆಯಲಾಗಿ, ಬಿಲ್ಲಿನ ಹೆದೆ ಇಳಿಯಿತ್ತು, ಸೈವೆರಗು ಬಿಟ್ಟಿತ್ತು. ಅಂಬಿನ ಕಣೆ ಎಲ್ಲಿ ಹೋಯಿತ್ತೆಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.