Index   ವಚನ - 358    Search  
 
ಜೀವವ ಕಡಿದವಂಗಿಲ್ಲದ ಪಾಪ, ಕತ್ತಿಗುಂಟೆ ಎಲೆದೇವಾ ? ಎಚ್ಚವನಿದ್ದಂತೆ ಅಂಬಿಗೆ ಮುನಿವರೆ ? ಕೊಲಿಸಿದ ಅರಸಿದ್ದಂತೆ ಬಂಟಂಗೆ ಮುನಿವರೆ ? ಎಲೆ ದಿವ್ಯಜ್ಞಾನವೆ, ಎನ್ನೊಡೆಯ ನಿಃಕಳಂಕ ಮಲ್ಲಿಕಾರ್ಜುನನಿದ್ದಂತೆ, ಎನ್ನನೇಕೆ ಕಾಡಿಹೆ ?