ತತ್ವಬ್ರಹ್ಮವನರಿವ ಹಿರಿಯರೆಲ್ಲರೂ ಕ್ಷುತ್ತಿನ ಸುಖವ ಮೆಚ್ಚಿ,
ಇಚ್ಫೆಯ ನುಡಿವುತ್ತಿಪ್ಪರು ನೋಡಾ.
ಚಿತ್ತವನರಿದಲ್ಲಿ ಕುಚಿತ್ತ ಬೋಧೆಯ ಹೇಳಲಾಗದು.
ಆಳಾಗಿರ್ದು ಅರಸಾಗಬಹುದಲ್ಲದೆ, ಅರಸಾಗಿರ್ದು ಆಳಾಗಬಾರದು.
ರೂಪಾಗಿರ್ದು ನಿರೂಪಾಗಬಹುದಲ್ಲದೆ,
ನಿರೂಪಾಗಿರ್ದು ರೂಪಾಗಬಾರದು.
ಇದು ಕಾರಣ, ನಾ ಸತ್ತೆನೆಂಬ ಹೆಣವಿಲ್ಲವಾಗಿ,
ನಾ, ನೀನೆಂಬ ಉಭಯವ ಹಿಂಗಿಯಲ್ಲದೆ,
ಪರಿಪೂರ್ಣವಾಗಬಾರದು, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Tatvabrahmavanariva hiriyarellarū kṣuttina sukhava mecci,
icpheya nuḍivuttipparu nōḍā.
Cittavanaridalli kucitta bōdheya hēḷalāgadu.
Āḷāgirdu arasāgabahudallade, arasāgirdu āḷāgabāradu.
Rūpāgirdu nirūpāgabahudallade,
nirūpāgirdu rūpāgabāradu.
Idu kāraṇa, nā sattenemba heṇavillavāgi,
nā, nīnemba ubhayava hiṅgiyallade,
paripūrṇavāgabāradu, niḥkaḷaṅka mallikārjunā.