ಅಯ್ಯಾ! ತತ್ತ್ವ ವಿತತ್ತ್ವಗಳಿಲ್ಲದಂದು,
ಪ್ರಕೃತಿ ಪುರುಷರಿಲ್ಲದಂದು,
ಜೀವ-ಪರಮರೆಂಬ ಭಾವ ತಲೆದೋರದಂದು,
ಏನೂ ಏನೂ ಇಲ್ಲದಂದು
ಬಯಲು ಬಲಿದು ಒಂದು
ಬಿಂದುವಾಯಿತ್ತು ನೋಡಾ.
ಆ ಬಿಂದು ಅಕ್ಷರತ್ರಯದ ಗದ್ದುಗೆಯಲ್ಲಿ ಕುಳ್ಳಿರಲು
ಓಂಕಾರ ಉತ್ಪತ್ತಿಯಾಯಿತ್ತು.
ಆ [ಓಂಕಾರದ] ನಾದದಲ್ಲಿ
ಮೂರ್ತಿಗೊಂಡನೊಬ್ಬ ಶರಣ.
ಆ ಶರಣನಿಂದಾಯಿತ್ತು ಪ್ರಕೃತಿ,
ಆ ಪ್ರಕೃತಿಯಿಂದಾಯಿತ್ತು ಲೋಕ.
ಈ ಲೋಕ ಲೌಕಿಕವನತಿಗಳೆದು ನಿಜದಲ್ಲಿ ನಿವಾಸಿಯಾಗಿಪ್ಪ,
ಗುಹೇಶ್ವರನ ಶರಣ ಚೆನ್ನಬಸವಣ್ಣನ ಘನವನು
ಬಸವಣ್ಣನ ಕೃಪೆಯಿಂದಲರಿದು
ನಮೋ ನಮೋ ಎನುತಿರ್ದೆನು ಕಾಣಾ ಸಿದ್ಧರಾಮಯ್ಯ.
Transliteration Ayyā! Tattva vitattvagaḷilladandu,
prakr̥ti puruṣarilladandu,
jīva-paramaremba bhāva taledōradandu,
ēnū ēnū illadandu
bayalu balidu ondu
binduvāyittu nōḍā.
Ā bindu akṣaratrayada gaddugeyalli kuḷḷiralu
ōṅkāra utpattiyāyittu.
Ā [ōṅkārada] nādadalli
mūrtigoṇḍanobba śaraṇa.
Ā śaraṇanindāyittu prakr̥ti,
ā prakr̥tiyindāyittu lōka.
Ī lōka laukikavanatigaḷedu nijadalli nivāsiyāgippa,
guhēśvarana śaraṇa cennabasavaṇṇana ghanavanu
basavaṇṇana kr̥peyindalaridu
namō namō enutirdenu kāṇā sid'dharāmayya.
Hindi Translation अय्या तत्व वितत्व न रहते, प्रकृति पुरुष न रहते,
जीव परम जैसे भाव न दिखा रहते, कुछ कुछ न रहते
शून्य बढकर एक बिंदूबना था देख।
वह बिंदु अक्षरत्रय की गद्दी पर बैठने से
ऊॅ॑कार उत्पत्ति हुआ था।
उस (ऊॅ॑कार) नाद में रूप बना एक शरण।
उस शरण से हुई थी प्रकृति, उस प्रकृति से हुआ था लोक।
यह लोक लौकिक उल्लंघितकर निज में निवासी बना,
गोहेश्वर का शरण चेन्नबसवण्णा बसवण्णा के घन का
बसवण्णा की कृपा से जानकर नमो नमो कहूँगा रहा हूं।
Translated by: Eswara Sharma M and Govindarao B N