Index   ವಚನ - 439    Search  
 
ನಾನೇಕೆ ಬಂದೆ ಸುಖವ ಬಿಟ್ಟು? ಬಂದುದಕ್ಕೆ ಒಂದೂ ಆದುದಿಲ್ಲ. ಸಂಸಾರದಲ್ಲಿ ಸುಖಿಯಲ್ಲ, ಪರಮಾರ್ಥದಲ್ಲಿ ಪರಿಣಾಮಿಯಲ್ಲ. ಸಿಕ್ಕಿದೆ ಅರ್ತಿಗಾರಿಕೆಯೆಂಬ ಭಕ್ತಿಯಲ್ಲಿ. ದಾಸಿಯ ಕೂಸಿನಂತೆ ಒಡವೆಗಾಸೆಮಾಡಿ, ಗಾಸಿಯಾದೆ ಮನೆಯೊಡೆಯನ ಕೈಯಲ್ಲಿ. ಈ ಭಾಷೆ ಇನ್ನೇಸು ಕಾಲ, ನಿಃಕಳಂಕ ಮಲ್ಲಿಕಾರ್ಜುನಾ ?