ಅಯ್ಯಾ! ನಿಜವಸ್ತು ನೆಲೆಸಿರ್ಪ ನೇತ್ರವೇ
ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ
ರಹಸ್ಯಕ್ಕೆ ರಹಸ್ಯ, ಕೂಟಕ್ಕೆ ಕೂಟ,
ನೋಟಕ್ಕೆ ನೋಟ, ಬೇಟಕ್ಕೆ ಬೇಟ.
ಅದೆಂತೆಂದಡೆ:
ಲಿಂಗಸ್ಯ ಸಾಯಕಂ ನೇತ್ರಂ ಚುಕ್ಷುರ್ಲಿಂಗಸ್ಯ ಚಕ್ಷುಸಃ
ಇಂತೆಂದುದಾಗಿ,
ಗುರುಕಟಾಕ್ಷೆಯಿಂದ ಇಷ್ಟ-ಪ್ರಾಣ-ಭಾವಲಿಂಗ ಸಂಬಂಧವಾದ
ಮಹಾಘನ ಚಕ್ಷುವೆ ಗುಹೇಶ್ವರಲಿಂಗಕ್ಕೆ
ಮಹಾಪ್ರಸಾದ ನೋಡಾ ಸಿದ್ಧರಾಮಯ್ಯಾ.
Transliteration Ayyā! Nijavastu nelesirpa nētravē
guhyakke guhya, gōpyakke gōpya
rahasyakke rahasya, kūṭakke kūṭa,
nōṭakke nōṭa, bēṭakke bēṭa.
Adentendaḍe:
Liṅgasya sāyakaṁ nētraṁ cukṣurliṅgasya cakṣusaḥ
intendudāgi,
gurukaṭākṣeyinda iṣṭa-prāṇa-bhāvaliṅga sambandhavāda
mahāghana cakṣuve guhēśvaraliṅgakke
mahāprasāda nōḍā sid'dharāmayyā.
Hindi Translation अय्या परवस्तु रहे नेत्र,
गुह्य का गुह्य, गौप्य का गौप्य,
रहस्य का रहस्य, मिलन का मिलन,
दर्शन का दर्शन, मोह का मोह,
वह कैसे कहें तो-
‘लिंगस्य सायकं नेत्रं
चक्षुर्लिंगस्य चक्षुस:’।
ऐसे -
गुरुकटाक्ष से इस्ट-प्राण-भाव लिंग संबंध
महाघन चक्षु गुहेश्वर लिंग को महा प्रसाद देखा सिद्धरामय्या।
Translated by: Eswara Sharma M and Govindarao B N