ನೀರು ಕೂಡಿ[ದ] ಕ್ಷೀರ ಬೆಂದಲ್ಲದೆ ಮತ್ತಾ
ನೀರು ಸಾರವರತು ಹೊತ್ತದೆ ಉಳಿದ ಉಳುಮೆಯೆಂತೋ?
ಇಕ್ಷುವಿನ ಸಾರ ಅಪ್ಪುವಿನ ಕೂಟದಿಂದ ಪಕ್ವವಾಗಿ,
ಮತ್ತೆ ಉಳಿದುದು ಸಕ್ಕರೆಯಾದಂತೆ,
ಎಣ್ಣೆ ನೀರ ಕೂಡಿ ಬೆಂದು, ಬಿನ್ನಾಣದಿ ಮೇಲೇರಿ,
ಆ ಉಭಯಕ್ಕೆ ಅನ್ಯವಿಲ್ಲದೆ ಬೇರೆಯಾದಂತೆ,
ಇಂತೀ ಸ್ಥಲವನೆಯ್ದಿ, ನಿಃಸ್ಥಲವಾಗಬೇಕು.
ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಷಟ್ಸ್ಥಲ ಸಂಪೂರ್ಣ.
Art
Manuscript
Music
Courtesy:
Transliteration
Nīru kūḍi[da] kṣīra bendallade mattā
nīru sāravaratu hottade uḷida uḷumeyentō?
Ikṣuvina sāra appuvina kūṭadinda pakvavāgi,
matte uḷidudu sakkareyādante,
eṇṇe nīra kūḍi bendu, binnāṇadi mēlēri,
ā ubhayakke an'yavillade bēreyādante,
intī sthalavaneydi, niḥsthalavāgabēku.
Niḥkaḷaṅka mallikārjunanalli ṣaṭsthala sampūrṇa.