ನೀರಿನ ಮೇಲಣ ತೆಪ್ಪ ಒಪ್ಪವಾಗಿ ಹೋಹುದು
ತೆಪ್ಪದ ಗುಣವೋ, ಅಪ್ಪುವಿನ ಗುಣವೋ ? ಮೇಲಿದ್ದು ಒತ್ತುವನ ಗುಣವೋ ?
ಇಂತೀ ಭೇದವ ಭೇದಿಸಿ, ನೀರ ಬಟ್ಟೆಯಲ್ಲಿ ಹೋಹವನ ಯುಕ್ತಿ.
ಇಷ್ಟದ ಪೂಜೆ, ದೃಷ್ಟದ ನಿಷ್ಠೆ,
ನಿಷ್ಠೆಯ ಶ್ರದ್ಧೆಯ ಸದಮಲದಲ್ಲಿ ತೊಳಗಿ ಬೆಳಗುವ ಬೆಳಗು.
ಆ ಕಳೆಯೆನ್ನಲ್ಲಿ ಕಾಂತಿ ಕಳೆದೋರೆ, ಕರಣಂಗಳ ವೇಷದ ಪಾಶ ಹರಿಗು,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Nīrina mēlaṇa teppa oppavāgi hōhudu
teppada guṇavō, appuvina guṇavō? Mēliddu ottuvana guṇavō?
Intī bhēdava bhēdisi, nīra baṭṭeyalli hōhavana yukti.
Iṣṭada pūje, dr̥ṣṭada niṣṭhe,
niṣṭheya śrad'dheya sadamaladalli toḷagi beḷaguva beḷagu.
Ā kaḷeyennalli kānti kaḷedōre, karaṇaṅgaḷa vēṣada pāśa harigu,
niḥkaḷaṅka mallikārjunā.