Index   ವಚನ - 464    Search  
 
ನೀರೊಳಗಣ ಶಿಲೆಯ ಒಡೆಯರುಗಳೆಲ್ಲರೂ ಕೂಡಿ, ಅದ ಊರಿ ನೆನೆಯಿತ್ತೆಂದಡೆ, ಅದು ಸಾರಾಯವಾಯಿತ್ತೆ ? ಮೀರಿದ ಶರಣರೆಲ್ಲರೂ ಕೂಡಿ, ಗುರು ಕೊಟ್ಟ ಲಿಂಗವ ಸೇರುವ ಸಾರಾಯವ ಬಲ್ಲರೆ ? ಹುತ್ತವ ಬಡಿದಡೆ ಹಾವು ಸತ್ತುದುಂಟೆ ? ಇದು ನಿಶ್ಚಯವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.