ಪರಬ್ರಹ್ಮವ ನುಡಿಯುತ್ತ, ಪರದ್ರವ್ಯವ ಕೈಯಾಂತು ಬೇಡುತ್ತ,
ಮಾತಿನಲ್ಲಿ ಶೂನ್ಯತನ, ಮನದಲ್ಲಿ ಆಶೆಯೆಂಬ ತೊರೆ
ಹಾಯಬಾರದೆ ಹರಿವುತ್ತಿದೆ.
ಮತ್ತೆಂತಯ್ಯ ಪರಬ್ರಹ್ಮದ ಮಾತು ?
ಇದು ಎನಗೆ ಹೇಸಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Parabrahmava nuḍiyutta, paradravyava kaiyāntu bēḍutta,
mātinalli śūn'yatana, manadalli āśeyemba tore
hāyabārade harivuttide.
Mattentayya parabrahmada mātu?
Idu enage hēsikeyāyittu, niḥkaḷaṅka mallikārjunā.