ಪಿಂಡ ಪಿಂಡಸ್ಥಲ, ಭಾವ ಭಾವಸ್ಥಲ, ಜ್ಞಾನ ಜ್ಞಾನಸ್ಥಲ.
ಒಂದು ಕೆಂಡದ ಬುಡದಲ್ಲಿ ನಾನಾ ಉರಿ,
ದಿಕ್ಕುದಿಕ್ಕಿನಲ್ಲಿ ಹತ್ತಿ ಬೇವುದ ಕಂಡು ಲಕ್ಷಿಸಿದ ಮತ್ತೆ,
ಒಂದು ಮೂರಾಗಿ, ಮೂರು ಆರಾಗಿ,
ಇಂತೀ ನಾನಾ ಭೇದಂಗಳ ತಾ ಕಂಡ ಮತ್ತೆ,
ಬಾಗಿಲವಳಿ ಹೊಳಹಿನಂತೆ ಎಯ್ದುವುದು ಒಂದೇ ದಾರಿ.
ಆ ಭೇದವನರಿತಲ್ಲಿ, ಅಭೇದ್ಯಮೂರ್ತಿ,
ಏಕಛತ್ರಕ್ಕೆ ನೀವೆ ಅರಸು, ನಿಃಕಳಂಕ ಮಲ್ಲಿಕಾರ್ಜುನಾ.