Index   ವಚನ - 492    Search  
 
ಪೂರ್ವವನಳಿದು ಪುನರ್ಜಾತನ ಮಾಡಿದೆವೆಂಬಿರಿ. ಪೂರ್ವವನಳಿದುದಕ್ಕೆ ಭವ ಹಿಂಗಬೇಕು. ಪುನರ್ಜಾತನಾದ ಮತ್ತೆ ಪುನರಪಿ ಇಲ್ಲದಿರಬೇಕು. ಹೀಂಗಲ್ಲದೆ ಗುರುಕರಜಾತನಾಗಬಾರದು. ತಾನರಿದು ಸರ್ವೇಂದ್ರಿಯವ ಮರೆದು, ಅಳಿವು ಉಳಿವು ಉಭಯವ ಪರಿದ ಸುಖನಿಶ್ಚಯ ಜ್ಯೋತಿರ್ಮಯ ಪ್ರಕಾಶಂಗೆ, ಪಿಂಡದ ಜನ್ಮವ ಕಳೆದುಳಿಯಬೇಕು. ಹೀಂಗಲ್ಲದೆ ಗುರುಸ್ಥಲ ಇಲ್ಲ. ತ್ರಿವಿಧಕ್ಕೋಲು, ಅದಾರಿಗೆ ದೃಷ್ಟ? ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.