Index   ವಚನ - 508    Search  
 
ಪ್ರಾಣಲಿಂಗಸಂಬಂಧಿಗಳೆಂಬ ಭಾವದಭ್ರಮೆಯಿಂದ ಬಳಲುತ್ತಿಪ್ಪ ಜ್ಞಾನಿಗಳು, ನೀವು ಕೇಳಿರೋ, ಲಿಂಗಪ್ರಾಣವೋ ? ಪ್ರಾಣಲಿಂಗವೋ ? ಸಂಗದ ಗುಣವೋ ? ಎಂಬುದನರಿದಾಗವೆ, ಲಿಂಗ ಅಂಗ, ಅಂಗ ಲಿಂಗ ಉಭಯದ ಸಂದ ಹರಿದಾಗವೆ ಪ್ರಾಣಲಿಂಗ. ಪ್ರಾಣನ ಪ್ರಕೃತಿಯ ಭಾವಿಸದಿದ್ದಾಗವೆ, ಪರಮಪ್ರಕಾಶ. ಇಷ್ಟರಿಂದ ನಾನರಿಯೆ, ನೀನಾಡಿಸುವ ಬೊಂಬೆ ನಾನು. ನನ್ನ ಭಾವದ ಭ್ರಮೆಯ ಬಿಡಿಸಿ, ನಿರ್ಭಾವಕ್ಕೆ ನೆಲೆಗೊಳ್ಳಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.