ಬಂದ ಪದಾರ್ಥವ ಸವಿದು ಚಪ್ಪಿರಿದು,
ಆಹಾ ಲಿಂಗಕ್ಕೆ ಅರ್ಪಿತವಾಯಿತ್ತೆಂದು ಕಂಗಳ ಮುಚ್ಚಿ, ಅಂಗವ ತೂಗಿ,
ಮಹಾಲಿಂಗವೆ ನೀನೇ ಬಲ್ಲೆ ಎಂದು ಕಂಡವರು ಕೇಳುವಂತೆ,
ಹಿಂಗದ ಲಿಂಗಾಂಗಿ ಇವನೆಂದು ವಂದಿಸಿಕೊಳ್ಳಬೇಕೆಂದು,
ಅಂದಗಾರಿಕೆಯಲ್ಲಿ ನಡೆವ ಭಂಡರಿಗೆಲ್ಲಿಯದೊ ಲಿಂಗಾರ್ಪಿತ ?
ಲಿಂಗಕ್ಕೆ ಸಂದ ಸವಿಯ,
ಹಿಂದೆ ಮುಂದೆ ಇದ್ದವರು ಕೇಳುವಂತೆ
ಲಿಂಗಾರ್ಪಿತವುಂಟೆ ?
ಭ್ರಮರ ಕೊಂಡ ಕುಸುಮದಂತೆ, ವರುಣ ಕೊಂಡ ಕಿರಣದಂತೆ,
ವಾರಿ ಕೊಂಡ ಸಾರದಂತೆ, ತನ್ನಲ್ಲಿಯೇ ಲೇಪ ಅರ್ಪಿತ ಅವಧಾನಿಗೆ.
ಹೀಂಗಲ್ಲದೆ ಕೀಲಿನೊಳಗಿಪ್ಪ ಕೀಲಿಗನಂತೆ,
ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Banda padārthava savidu cappiridu,
āhā liṅgakke arpitavāyittendu kaṅgaḷa mucci, aṅgava tūgi,
mahāliṅgave nīnē balle endu kaṇḍavaru kēḷuvante,
hiṅgada liṅgāṅgi ivanendu vandisikoḷḷabēkendu,
andagārikeyalli naḍeva bhaṇḍarigelliyado liṅgārpita?
Liṅgakke sanda saviya,
hinde munde iddavaru kēḷuvante
liṅgārpitavuṇṭe?
Bhramara koṇḍa kusumadante, varuṇa koṇḍa kiraṇadante,
vāri koṇḍa sāradante, tannalliyē lēpa arpita avadhānige.
Hīṅgallade kīlinoḷagippa kīliganante,
innārige hēḷuve, niḥkaḷaṅka mallikārjunā.