Index   ವಚನ - 528    Search  
 
ಬಾಯ ಮುಚ್ಚಿ, ಹೊಟ್ಟೆ ತುಂಬ ಉಂಬವರನಾರನೂ ಕಾಣೆ. ಕಣ್ಣ ಮುಚ್ಚಿ, ಬಣ್ಣ ಸುಣ್ಣವನರಿವವರನಾರನೂ ಕಾಣೆ. ಕರ್ಣವ ಮುಚ್ಚಿ, ಚೆನ್ನಾಗಿ ಕೇಳುವ ಅಣ್ಣಗಳನಾರನೂ ಕಾಣೆ. ಪ್ರಸನ್ನ ಎನಗಿನ್ನಾವುದೋ, ನಿಃಕಳಂಕ ಮಲ್ಲಿಕಾರ್ಜುನಾ?